ಮೈಸೂರಿನ ಭೂ ಹಗರಣದ ಬಗ್ಗೆ ತನಿಖೆ ಮಾಡಲು ರೋಹಿಣಿ ಸಿಂಧೂರಿಯವರನ್ನು ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸಿ : ಹೆಚ್.ವಿಶ್ವನಾಥ್ ಒತ್ತಾಯ…

103
firstsuddi

ಮೈಸೂರು : ಜಿಲ್ಲೆಯಲ್ಲಿ ಕೇಳಿಬರುತ್ತಿರುವ ಭೂ ಹಗರಣದ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ .ವಿಶ್ವನಾಥ್ ಅವರು ಒತ್ತಾಯಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಬೆಂಗಳೂರಿನಲ್ಲಿ ನಾಳೆ ಸಿಎಂ, ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಜಿಲ್ಲೆ ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಭೂ ಹಗರಣದ ತನಿಖೆಗೆ ರೋಹಿಣಿ ಸಿಂಧೂರಿಯವರನ್ನು ವಿಶೇಷಾಧಿಕಾರಿಯಾಗಿ ನೇಮಿಸಲು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜಕಾಲುವೆ ಮೇಲೆ ಸಾರಾ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಇಲ್ಲಿ ಸಾವಿರಾರು ಎಕರೆ ಭೂಮಿ ಉಳ್ಳವರ ಪಾಲಾಗಿದೆ. ಕೊರೊನಾ ಓಡಿಸಿ ಅಂತ ಸಿಎಂ, ಪಿಎಂ ಕರೆ ನೀಡಿದ್ದರು. ಇವರೆಲ್ಲಾ ಸೇರಿ ಐಎಎಸ್ ಅಧಿಕಾರಿಗಳನ್ನು ಓಡಿಸುತ್ತಿದ್ದಾರೆ. ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ಇಬ್ಬರು ಒಳ್ಳೆಯ ಅಧಿಕಾರಿಗಳು. ರಾಜಕಾರಣಿಗಳ ಸ್ವಾರ್ಥಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಹೊರ ಹಾಕಿದ್ದಾರೆ ಎಂದರು.

ಇಲ್ಲಿ ರಾಜಕಾರಣಿಗಳ ಕಿತಾಪತಿಗೆ ಶಿಲ್ಪಾ ನಾಗ್ ಬಲಿಪಶುವಾದರು. ಮಿಷನ್ ಕಂಪ್ಲೀಟೆಡ್ ಎಂದು ಶಿಲ್ಪನಾಗ್ ಅವರೇ ಹೇಳಿದ್ದಾರೆ. ಹಾಗದರೆ ರೋಹಿಣಿ ಸಿಂಧೂರಿಯವರೇ ಮಿಷನ್ ಕಂಪ್ಲೀಟೆಡ್ಹಾ ಎಂದು ವಿಶ್ವನಾಥ್ ಅವರು ಪ್ರಶ್ನಿಸಿದರು.