ಹಾವೇರಿ : ಆಟವಾಡುತ್ತಿದ್ದಾಗ ಮೊಬೈಲ್ ನ ಹಳೆಯ ಬ್ಯಾಟರಿ ಸ್ಫೋಟಗೊಂಡು ಬಾಲಕನ ಕೈಯ ಮೂರು ಬೆರಳುಗಳು ತುಂಡಾಗಿದ್ದು ಹಾಗೂ ಮುಖಕ್ಕೆ ಗಾಯವಾದ ಘಟನೆ ಜಿಲ್ಲೆಯ ಸವಣೂರು ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.
ಕಾರ್ತಿಕ್ ಕಲಾದಗಿ(10) ಗಾಯಗೊಂಡ ಬಾಲಕ. ಮನೆಯ ಪಕ್ಕದಲ್ಲಿ ಎಸೆದಿದ್ದ ಮೊಬೈಲ್ ನ ಹಾಳಾದ ಬ್ಯಾಟರಿ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಕಾರ್ತಿಕನನ್ನು ಸವಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.










