ಮೋದಿ ಹೆಸರಿನಲ್ಲಿ ಅನ್ನದಾನದ ರಶೀದಿ ನೀಡಲು ನಿರಾಕರಿಸಿದ ಮಂತ್ರಾಲಯ ಸಿಬ್ಬಂದಿ.

90
firstsuddi

ಚಿಕ್ಕಮಗಳೂರು : ನರೇಂದ್ರ ಮೋದಿ ಸರ್ಕಾರ ಎಂಟು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಯುವಕರ ತಂಡ ವಿಶೇಷ ಪೂಜೆ ಮಾಡಿಸಲು ಮಂತ್ರಾಲಯಕ್ಕೆ ತೆರಳಿತ್ತು. ಅಲ್ಲಿ ನರೇಂದ್ರ ಮೋದಿ ಹೆಸರಿನಲ್ಲಿ ಅನ್ನದಾನದ ರಶೀದಿ ನೀಡಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಿಬ್ಬಂದಿ ನಿರಾಕರಿಸಿದ್ದಾರೆ.

ಇದಕ್ಕೆ ಬಿಜೆಪಿ ಕಾರ್ಯಕರ್ತರು ರಶೀದಿ ನೀಡಲು ಯಾಕೆ ನಿರಾಕರಿಸುತ್ತೀರಿ ಎಂದು ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ರಶೀದಿ ನೀಡಲು ನಿರಾಕರಿಸಿದ ಸಿಬ್ಬಂದಿಯನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು 5 ನಿಮಿಷದ ವಾಗ್ವಾದದ ಬಳಿಕ ಕೊನೆಗೆ ಅಲ್ಲಿನ ಸಿಬ್ಬಂದಿ ರಶೀದಿ ನೀಡಿದ್ದಾರೆ.