ಹಯೋನಿ (ವಿಯೆಟ್ನಾಂ): ಭೀಕರ ಯಾಗಿ ಚಂಡಮಾರುತಕ್ಕೆ ವಿಯೇಟ್ನಾಂ ನಲುಗಿದೆ. ಈವರೆಗೆ 254 ಮಂದಿ ಸಾವನ್ನಪ್ಪಿದ್ದು, 82 ಜನ ಕಣ್ಮರೆಯಾಗಿದ್ದಾರೆ. ಇಂದು ಕೂಡ 149 ಕಿಲೋಮೀಟರ್ ವೇಗದಲ್ಲಿ ಯಾಗಿ ಚಂಡಮಾರುತ ಬೀಸಲಿದೆ ನಾಳೆ (ಭಾನುವಾರ) ಅದರ ವೇಗ ಕಡಿಮೆಯಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾವೋ ಕೈ, ಕಾವೊ ಬ್ಯಾಂಗ್ ಮತ್ತು ಯೆನ್ ಬಾಯಿ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಾಗಿವೆ. ಸಾವುಗಳು ಕ್ರಮವಾಗಿ 111, 43 ಮತ್ತು 49 ಕ್ಕೆ ಏರಿಕೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ವಿಪತ್ತು ತಡೆಗಟ್ಟುವಿಕೆ, ನಿಯಂತ್ರಣ ಹುಡುಕಾಟ ಮುಂದುವರೆದಿದೆ. ನಗರದ ಸ್ಟೀರಿಂಗ್ ಸಮಿತಿಯ ಪ್ರಕಾರ, ರಾಜಧಾನಿ ಹಮೋನಿಯಲ್ಲಿ ಕೆಂಪು ನದಿಯ ಪ್ರವಾಹವು ಎಚ್ಚರಿಕೆಯ ಮಟ್ಟಕ್ಕಿಂತ ಕಡಿಮೆಯಾಗಿದೆ.
ಚಂಡಮಾರುತದಿಂದ ಧ್ವಂಸಗೊಂಡ ಸುಮಾರು ಒಂದು ವಾರದ ನಂತರ ಶುಕ್ರವಾರ ಪ್ರವಾಸಿ ದೋಣಿಗಳು ಸಾಮಾನ್ಯ ಕಾರ್ಯಾಚರಣೆಯನ್ನು ಅಧಿಕೃತವಾಗಿ ಪುನರಾರಂಭಿಸಲಾಗಿದೆ ಎಂದು ವಿಯೆಟ್ನಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಕ್ಷಾಂತರ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ ಮತ್ತು ಶುದ್ದ ನೀರು, ನೈರ್ಮಲ್ಯ ಮತ್ತು ಆರೋಗ್ಯದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಯುಎನ್ ಮಕ್ಕಳ ಸಂಸ್ಥೆ (ಯುನಿಸೆಫ್) ಹೇಳಿಕೆಯಲ್ಲಿ ತಿಳಿಸಿದೆ.
ಶಾಲೆಗಳು ಹಾನಿಗೊಳಗಾಗಿರುವುದರಿಂದ ಮತ್ತು ವಿದ್ಯುತ್ ಮತ್ತು ನೀರಿನ ಕೋರತೆಯಿಂದಾಗಿ ಸುಮಾರು ಎರಡು ಮಿಲಿಯನ್ ಮಕ್ಕಳು ಶಿಕ್ಷಣ, ಮಾನಸಿಕ ಸಾಮಾಜಿಕ ಬೆಂಬಲ ಮತ್ತು ಸಾಲಾ ಪೋಷಣೆ ಕಾಯಕ್ರಮಗಳಿಗೆ ಪ್ರವೇಶವಿಲ್ಲದೆ ಉಳಿದಿದ್ದಾರೆ ಎಂದು ಅದು ಸೇರಿಸಿದೆ.
ವಿಯೆಟ್ನಾಂ ಫಾದರ್ ಲ್ಯಾಂಡ್‍ಫ್ರಂಟ್ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಯಾಗಿ ಚಂಡಮಾರುತ ಪೀಡಿತರಿಗೆ ಬೆಂಬಲವಾಗಿ ನಿಂತಿದ್ದು ದೇಶಾದ್ಯಂತ ಜನರಿಗೆ 775.5 ಬಿಲಿಯನ್ ದೇಣಿಗೆಯನ್ನು ಸ್ವೀಕರಿಸಿದೆ ಎಂದು ಘೋಷಿಸಿದೆ.










