ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ. ರವಿಕುಮಾರ್ ಅವರು ನೇಮಕ…

120
firstsuddi

ಬೆಂಗಳೂರು : ರಾಜ್ಯ ಸರ್ಕಾರದ ನೂತನ 38ನೇ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಪಿ. ರವಿಕುಮಾರ್ ಆಯ್ಕೆಯಾಗಿದ್ದಾರೆ. ಹಾಲಿ ಮುಖ್ಯ ಕಾರ್ಯದರ್ಶಿಯಾಗಿರುವ ಟಿ.ಎಂ ಬವಿಜಯ್ ಭಾಸ್ಕರ್ ಅವರ ಸೇವಾವಧಿ ನಾಳೆ ಮುಕ್ತಾಯವಾಗಲಿದ್ದು, ಈ ಹಿನ್ನೆಲೆ ತೆರವಾಗಲಿರುವ ಸ್ಥಾನಕ್ಕೆ ಪಿ. ರವಿ ಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1984ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪಿ. ರವಿಕುಮಾರ್ ಅವರಿಗೆ ವಿಜಯ್ ಭಾಸ್ಕರ್ ಅವರು ಅಧಿಕಾರ ಹಸ್ತಾಂತರಿಸಲಿದ್ದಾರೆ.