ರಾಜ್ಯದ ವಿವಿದೆಡೆ ಭಾರಿ ಮಳೆ, ಕಾಲುವೆ ನೀರಲ್ಲಿ ಕೊಚ್ಚಿ ಹೋದ ಬಾಲಕ…

202
firstsuddi

ಹಾವೇರಿ : ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದ್ದು, ಭಾರಿ ಮಳೆಯಿಂದ ಕಾಲುವೆಯ ನೀರಿನಲ್ಲಿ ಬಾಲಕ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಹಿರೇಕೆರೂರ ಪಟ್ಟಣದಲ್ಲಿ ನಡೆದಿದೆ. ಸೋಯೆಬ್(14) ನೀರಲ್ಲಿ ಕೊಚ್ಚಿ ಹೋದ ಬಾಲಕ ಎನ್ನಲಾಗಿದ್ದು, ರಾಣೆಬೆನ್ನೂರು ಮೂಲದ ಸೋಯೆಬ್ ಭಾರಿ ಮಳೆಯಿಂದ ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ನೋಡಲು ತೆರಳಿದ್ದು, ಈ ವೇಳೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದು, ಹಿರೇಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.