ರಾಜ್ಯದಲ್ಲಿ ಇಂದು 12 ಹೊಸ ಕೊರೊನಾ ಪ್ರಕರಣ ಪತ್ತೆ-ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ…

130
firstsuddi

ಬೆಂಗಳೂರು : ರಾಜ್ಯದಲ್ಲಿ ಇಂದು ಮತ್ತೆ 12 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ. ಮೈಸೂರು-3, ಕಲಬುರಗಿ-2, ಬಾಗಲಕೋಟೆರ-2 ಮಂಡ್ಯ, ಧಾರವಾಡ, ಗದಗ, ವಿಜಯಪುರದಲ್ಲಿ ತಲಾ ಒಬ್ಬೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 371 ಮಂದಿಯ ಪೈಕಿ ರಾಜ್ಯದಲ್ಲಿ 13 ಮಂದಿ ಸೋಂಕಿನಿಂದ ಬಲಿಯಾಗಿದ್ದು, 92 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 264 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ