ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ ; 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ…

112
firstsuddi

ನವದೆಹಲಿ :  ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸೇರಿದಂತೆ 12 ಕ್ರೀಡಾಪಟುಗಳನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನೂ ಪ್ಯಾರಾಲಿಂಪಿಕ್ಸ್ ಪದಕ ವಿಜೇತ, ಕನ್ನಡಿಗ ಐಎಎಸ್ ಅಧಿಕಾರಿ ಸುಭಾಶ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರಕಟಿಸಲಾಗಿದೆ. ನವೆಂಬರ್ 13 ರಂದು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ ಹೀಗಿದೆ:
• ನೀರಜ್ ಚೋಪ್ರಾ(ಅಥ್ಲೆಟಿಕ್ಸ್)
• ಸುನಿಲ್ ಚೆಟ್ರಿ (ಫುಟ್ಬಾಲ್)
• ರವಿ ದಹಿಯಾ(ಕುಸ್ತಿ)
• ಲೊವ್ಲಿನಾ ಬೊರ್ಗೊಹೈ(ಬಾಕ್ಸಿಂಗ್)
• ಮಿಥಾಲಿ ರಾಜ್(ಕ್ರಿಕೆಟ್)
• ಸುಮಿತ್ ಆಂಟಿಲ್(ಜಾವ್ಲಿನ್)
• ಅವನಿ ಲೇಖರ(ಶೂಟಿಂಗ್)
• ಪಿ.ಆರ್ ಶ್ರೀಜೇಶ್(ಹಾಕಿ)
• ಪ್ರಮೋದ್ ಭಗತ್(ಬ್ಯಾಡ್ಮಿಂಟನ್)
• ಮನ್‌ಪ್ರೀತ್ ಸಿಂಗ್(ಹಾಕಿ)
• ಕೃಷ್ಣ ನಗರ್(ಬ್ಯಾಡ್ಮಿಂಟನ್)
• ನರ್ವಾಲ್(ಶೂಟಿಂಗ್)