ರೆಮ್ ಡಿಸಿವಿರ್ ಇಂಜೆಕ್ಷನ್ ಎಂದು ಪೋಲಿಯೋ ಔಷಧಿ ಕದ್ದ ಖದೀಮರು…

121
firstsuddi

ಬೆಳಗಾವಿ : ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಇದರ ಮಧ್ಯೆಯೂ ಔಷಧಿ ಕಳ್ಳತನವಾಗುತ್ತಿದೆ.ರೆಮ್ ಡಿಸಿವಿರ್ ಇಂಜೆಕ್ಷನ್ ಎಂದು ತಿಳಿದು ಪೋಲಿಯೋ ಔಷಧಿ ಕದ್ದಿರುವ ಘಟನೆ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಅಥಣಿ ತಾಲೂಕು ಆಸ್ಪತ್ರೆಯಲ್ಲಿ ರೆಮ್ ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಆದರೆ ದಾರಿ ಮಧ್ಯೆಯೇ ಖದೀಮರಿಗೆ ತಾವು ಕದ್ದಿರುವುದು ರೆಮ್ ಡಿಸಿವಿರ್ ಇಂಜೆಕ್ಷನ್ ಅಲ್ಲ ಪೋಲಿಯೋ ಔಷಧಿ ಎಂದು ಗೊತ್ತಗಿದೆ. ತಕ್ಷಣವೇ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು ಖದೀಮರು ಪರಾರಿಯಾಗಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಥಣಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.