ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ- ಮೂವರ ಸಾವು…

131
firstsuddi

ಧಾರವಾಡ : ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊರವಲಯದ ಸವದತ್ತಿ ರಸ್ತೆಯ ಕೆಇಬಿ ಗ್ರೀಡ್ ಬಳಿ ನಡೆದಿದೆ. ನಾಗರಾಜರ್ ಇಚ್ಚಂಗಿ (35), ವಿಜಯಾ ಇಚ್ಚಂಗಿ (42), ರೇವಣ್ಣಸಿದ್ದಯ್ಯ ಇಚ್ಚಂಗಿ (46) ಮೃತ ದುರ್ಧೈವಿಗಳು ಎಂದು ಗುರುತಿಸಲಾಗಿದೆ. ಮೃತರು ಕಾರಿನಲ್ಲಿ ಸವದತ್ತಿಯಿಂದ ಹುಬ್ಬಳ್ಳಿಯ ಕಡೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.