ಲೋಕಾಯುಕ್ತರಿಗೆ ನೇರ ಫೋನ್ ಇನ್ ಕಾರ್ಯಕ್ರಮ – ಮೊದಲ ದಿನ 25 ದೂರು ಕರೆಗಳು ಸ್ವೀಕೃತ…

53
firstsuddi

ಮಂಗಳೂರು : ಮೊದಲ ದಿನದ ಲೋಕಾಯುಕ್ತ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 25 ದೂರು ಕರೆಗಳು ಬಂದಿರುವುದಾಗಿ ಲೋಕಾಯುಕ್ತ ಅಧೀಕ್ಷಕರಾದ ಲಕ್ಷ್ಮೀ ಗಣೇಶ್ ಕೆ ತಿಳಿಸಿದ್ದಾರೆ.

ಡಿಸೆಂಬರ್ 9 ರಂದು ಬೆಳಗ್ಗೆ 11-00 ಗಂಟೆಯಿಂದ 12-00 ಗಂಟೆಯವರೆಗೆ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಲಂಚದ ಬೇಡಿಕೆ ಮತ್ತು ಸಂಬಂಧ ದೂರುಗಳಿಗಾಗಿ “ನೇರ ಫೋನ್ – ಇನ್” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ದಿನ ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುತುವರ್ಜಿಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕರಿಂದ 25 ದೂರು ಕರೆಗಳು ಬಂದಿದ್ದು, ದೂರುಗಳಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮೂಡ ಇಲಾಖೆಗೆ ಸಂಬಂಧಿಸಿದ್ದು ಇದ್ದು ದೂರುಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.