ವರ್ಕ್ ಫ್ರಂ ಹೋಮ್ ಮಾಡಿಕೊಂಡಿದ್ದ ಐಟಿ ಯುವತಿ ಆತ್ಮಹತ್ಯೆ…

105
firstsuddi

ಪಡುಬಿದ್ರಿ : ಇಲ್ಲಿನ ಬ್ರಹ್ಮಸ್ಥಾನ ರಸ್ತೆ ಬಳಿಯ ನಿವಾಸಿ ಸೌಜನ್ಯಾ (22) ಅವರು ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೌಜನ್ಯಾ ಖಾಸಗಿ ಕಂಪೆನಿಯಲ್ಲಿ ದುಡಿಯುತ್ತಿದ್ದು, ಕೊರೊನಾ ಕಾರಣದಿಂದಾಗಿ ಕಳೆದ 10 ತಿಂಗಳಿನಿಂದ “ವರ್ಕ್ ಫ್ರಂ ಹೋಮ್’ ಕೆಲಸ ಮಾಡಿಕೊಂಡಿದ್ದಳು. ನಿನ್ನೆ ತಂದೆ-ತಾಯಿ ಸುರತ್ಕಲ್ ಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಸೀಲಿಂಗ್ ನ ಕಬ್ಬಿಣದ ಕೊಕ್ಕೆಗೆ ಸೀರೆಯನ್ನು ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನದ ವೇಳೆ ಪೋಷಕರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.