ವಿಧಾನಸೌಧದಲ್ಲಿ ಪತ್ತೆಯಾಯ್ತು ಬಿಯರ್ ಬಾಟಲ್!

88
firstsuddi

ಬೆಂಗಳೂರು : ವಿಧಾನಸೌಧದ ಎರಡನೇ ಮಹಡಿಯಲ್ಲಿ ಎರಡು ಬಿಯರ್ ಬಾಟಲ್ ಗಳು ಪತ್ತೆಯಾಗಿವೆ.

ವಿಧಾನಸೌಧದ 208 ನಂಬರ್ ರೂಂ ಪಕ್ಕದ ನೀರಿನ ಟ್ಯಾಂಕ್ ನ ಸಿಂಕ್ ಬಳಿ ಬಾಟಲ್ ಗಳು ಪತ್ತೆಯಾಗಿದ್ದು, ಯಾರು ಇದನ್ನು ಇಲ್ಲಿ ತಂದು ಇಟ್ಟರು? ಎಂಬುವುದು ಗೊತ್ತಾಗಿಲ್ಲ. ಇಲ್ಲಿ ಪಾರ್ಟಿ ನಡೆದಿದ್ಯಾ ಎಂಬ ಅನುಮಾನ ಮೂಡಿಸಿದೆ.

ಬಿಯರ್ ಬಾಟಲ್ ಫೋಟೋ ವೈರಲ್ ಆಗುತ್ತಿದ್ದಂತೆ ಸ್ವಚ್ಛತಾ ಸಿಬ್ಬಂದಿ ಬಾಟಲ್ ಗಳನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿದ್ದಾರೆ. ವಿಧಾನಸೌಧದ ಎಲ್ಲ ಕಡೆಗಳಲ್ಲೂ ಸಿಸಿ ಕ್ಯಾಮೆರಾ ಇದ್ದರೂ ಕಿಡಿಗೇಡಿಗಳು ಬಿಯರ್ ಬಾಟಲ್ ತಂದಿರುವುದು ಅಚ್ಚರಿಗೆ ಕಾರಣವಾಗಿದೆ.