ವಿನೋದ್ ಕಾಂಬ್ಳಿಗೆ 1 ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು…

172
firstsuddi

ಮುಂಬೈ : ಭಾರತದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರಿಗೆ ಸೈಬರ್ ವಂಚಕರು 1.1ಲಕ್ಷ ರೂ. ವಂಚಿಸಿದ್ದಾರೆ.

ತಮ್ಮ ಬ್ಯಾಂಕ್ ನ ಕೆವೈಸಿ ಮಾಹಿತಿಯನ್ನು ನವೀಕರಣ ಮಾಡುವಂತೆ ವ್ಯಕ್ತಿಯೋರ್ವ ಬ್ಯಾಂಕ್ ಸಿಬ್ಬಂದಿಯೆಂದು ಹೇಳಿಕೊಂಡು ವಿನೋದ್ ಕಾಂಬ್ಳಿಗೆ ಕರೆ ಮಾಡಿದ್ದಾನೆ. ಬ್ಯಾಂಕ್ ನ ಮಾಹಿತಿಗಳನ್ನು ಹಂಚಿಕೊಂಡರೆ ಕೆವೈಸಿ ನವೀಕರಣ ಮಾಡಲಾಗುತ್ತದೆ ಎಂದು ಆತ ಹೇಳಿದಾಗ ವಿನೋದ್ ಕಾಂಬ್ಳಿ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಕಾಂಬ್ಳಿ ಮೊಬೈಲ್ ಗೆ ಲಿಂಕ್ ಕಳಿಸಿದ ಆತ, ಈ ಆ್ಯಪ್ ಅನ್ನು ಇನ್ಸ್ ಟಾಲ್ ಮಾಡುವಂತೆ ಸೂಚಿಸಿದ್ದಾನೆ. ವಿನೋದ್ ಕಾಂಬ್ಳಿ ಆ ಆ್ಯಪ್ ಇನ್ಸ್ ಟಾಲ್ ಮಾಡಿಕೊಂಡ ನಂತರ ಹಂತಹಂತವಾಗಿ 1.1ಲಕ್ಷ ರೂಪಾಯಿಯನ್ನು ವಂಚಕ ದೋಚಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ವಿನೋದ್ ಕಾಂಬ್ಳಿ ವಂಚಕನ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.