ವಿವಾಹವಾದ 16ದಿನಕ್ಕೆ ಬಾಂಬ್ ಸ್ಪೋಟದಲ್ಲಿ ಯೋಧ ಹುತಾತ್ಮ…

454
firstsuddi

ಜಮ್ಮು-ಕಾಶ್ಮೀರ : ರಾಜಸ್ಥಾನ ಮೂಲದ ಯೋಧರೊಬ್ಬರು ಮದುವೆಯಾದ 16 ದಿನದಲ್ಲೇ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರಾದಲ್ಲಿ ನಡೆದಿದೆ. ಸೌರಬ್ ಕಠಾರಾ ಹುತಾತ್ಮ ಯೋಧ. ಸೌರಬ್ ಕಠಾರಾ ಅವರು ಡಿ.8ರಂದು ಪೂನಂ ಎಂಬುವವರನ್ನು ವಿವಾಹವಾಗಿದ್ದರು. ವಿವಾಹವಾದ ಬಳಿಕ ಸೌರಬ್ ಕಠಾರಾ ಅವರು ತಮ್ಮ 5ದಿನದ ರಜೆಯನ್ನು ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಕುಪ್ವಾರ ಎಂಬಲ್ಲಿ ಭಯೋತ್ಪಾದಕರ ಬಾಂಬ್ ಸ್ಪೋಟಕ್ಕೆ ಹುತಾತ್ಮರಾಗಿದ್ದಾರೆ. ಸೌರಬ್ ಅವರು ಹುತಾತ್ಮರಾದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಂದು ಸೌರಬ್ ಅವರ ಪಾರ್ಥೀವ ಶರೀರ ಅವರ ಸ್ವಗ್ರಾಮಕ್ಕೆ ತಲುಪಲಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.