ವಿಶ್ವನಾಥ್ ಅವರ ನಾಲಿಗೆ ಸಂಸ್ಕೃತಿ ಸರಿಯಿಲ್ಲ : ರೇಣುಕಾಚಾರ್ಯ.

112
firstsuddi

ಬೆಂಗಳೂರು : ಮುಖ್ಯಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿದ ಹೆಚ್.ವಿಶ್ವನಾಥ್ ವಿರುದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರ ವಿರುದ್ಧವಾಗಿ ಮಾತಾಡಿದ್ದರು. ಅದಕ್ಕೆ ಹಗುರವಾಗಿ ಮಾತಾಡಬೇಡಿ ಎಂದು ನಾವು ಮಾತಾಡಿದ್ದೆವು. ರಾಜಕಾರಣದಲ್ಲಿ ಹಿರಿಯರು, ಆದರೆ ಅವರ ನಾಲಿಗೆ ಸಂಸ್ಕೃತಿ ಸರಿಯಿಲ್ಲ. ಎಚ್. ವಿಶ್ವನಾಥ್ ಆಡಿಯೋ ವೀಡಿಯೋ ಎಲ್ಲಾ ಇದೆ. ಅದನ್ನ ಕೇಳಿಸಿಕೊಂದರೆ ಸಾಕು ಅವರು ಎಂತಹವರು ಅಂತ ಗೊತ್ತಾಗುತ್ತದೆ. ಅವರ ಬಗ್ಗೆ ಮಾತನಾಡಿದ್ರೆ ನನ್ನ ನಾಲಿಗೆಯೇ ಹೊಲಸಾಗುತ್ತದೆ ಎಂದು ಎಂದು ತಿರುಗೇಟು ನೀಡಿದ್ದಾರೆ.

ವಿಜಯೇಂದ್ರ ಮೇಲೆ ಕಿಕ್ ಬ್ಯಾಕ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಟೆಂಡರ್ ಪಾರದರ್ಶಕವಾಗಿದೆ. ಎಲ್ಲಾ ವಿವರವೂ ವೆಬ್ ಸೈಟ್ ನಲ್ಲಿ ಸಿಗುತ್ತದೆ. ಹತಾಶೆಯಿಂದ ವಿಶ್ವನಾಥ್ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.