ವೇದಿಕೆಯಲ್ಲೇ ಅನಾರೋಗ್ಯಕ್ಕೊಳಗಾದ ಕೇಂದ್ರ ಸಚಿವ ನಿತಿನ್ ಗಡ್ಕರಿ.

74
firstsuddi

ಕೋಲ್ಕತ್ತಾ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರು ವೇದಿಕೆಯಲ್ಲಿಯೇ ಅನಾರೋಗ್ಯಕ್ಕೊಳಗಾದರು.

ನಿತಿನ್ ಗಡ್ಕರಿ ಶಿವ ಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ಉದ್ದದ ರಸ್ತೆಯ ಶಂಕುಸ್ಥಾಪನೆಗೆ ಉತ್ತರ ಬಂಗಾಳದ ಸಿಲಿಗುರಿಗೆ ಬಂದಿದ್ದರು. ಕಾರ್ಯಕ್ರಮವನ್ನು ಡಾರ್ಜಿಲಿಂಗ್ ಜಂಕ್ಷನ್ ಬಳಿ ದಗಾಪುರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಹೀಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ವೇದಿಕೆ ಮೇಲೆ ಕುಳಿತಿದ್ದರು.
ಈ ವೇಳೆ ಏಕಾಏಕಿ ಅನಾರೋಗ್ಯಕ್ಕೀಡಾದರು.

ಕೂಡಲೇ ವೇದಿಕೆಯ ಹಿಂದಿನ ಗ್ರೀನ್ ರೂಮ್ ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಲಿಗುರಿಯಿಂದ ಗ್ರೀನ್ ಕಾರಿಡಾರ್ ಮೂಲಕ ಓರ್ವ ವೈದರನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರು ಸಚಿವರನ್ನು ಮನೆಗೆ ಕರೆದುಕೊಂಡು ಹೋದರು. ಕೇಂದ್ರ ಸಚಿವರ ಚಿಕಿತ್ಸೆಗೆ ಮತ್ತಿಗಾರದಲ್ಲಿರುವ ಅವರ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಯಿತು

ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ವೈದ್ಯರ ಸಲಹೆಯಂತೆ ಸಲೈನ್ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.

ಸಿಲಿಗುರಿಯಲ್ಲಿ ನಡೆದ ಸಮಾರಂಭದ ನಂತರ ನಿತಿನ್ ಗಡ್ಕರಿ ದಲ್ಖೋಲಾಗೆ ಹೋಗಬೇಕಿತ್ತು. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗುವ ಸಾಧ್ಯತೆಯಿದೆ.