ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಹಿಮ್ಸ್ ಸಹಾಯಕ ಪ್ರಾಧ್ಯಾಪಕ ಅಮಾನತು…

66
firstsuddi

ಹಾಸನ : ತರಬೇತಿ ನಿರತ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಿಮ್ಸ್ ವೈದ್ಯಶಾಸ್ತ್ರ ವಿಭಾಗದಲ್ಲಿ ಸಹ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಡಾ. ಲೋಕೇಶ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇದೀಗ ಡಾ.ಲೋಕೇಶ್ ರನ್ನು ಅಮಾನತುಗೊಳಿಸಲಾಗಿದೆ. ನಾನು ಲಿಫ್ಟ್ ನಲ್ಲಿ ತೆರಳುವ ವೇಳೆ ವೈದ್ಯ ಏಕಾಏಕಿ ಮುತ್ತು ನೀಡಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ.

ಜನವರಿ 12ರಂದು ಕರ್ತವ್ಯದಲ್ಲಿರುವಾಗಲೇ ಮಹಿಳಾ ವೈದ್ಯೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಮಹಿಳಾ ವೈದ್ಯೆ ಲಿಖಿತ ದೂರು ಆಧರಿಸಿ ಹಿಮ್ಸ್ ನಿರ್ದೇಶಕರಿಗೆ, ವಿಭಾಗದ ಮುಖ್ಯಸ್ಥರಿಂದ ದೂರು ನೀಡಲಾಗಿತ್ತು. ಹಿಮ್ಸ್ ನಿರ್ದೇಶಕರ ದೂರು ಆಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ವೈದ್ಯನನ್ನು ಅಮಾನತು ಮಾಡಲಾಗಿದೆ.

ದಾಖಲೆಗಳ ಆಧಾರ ಪ್ರಕಾರ ಜನವರಿ 12 ರಂದು ಈ ಪ್ರಕರಣ ನಡೆದಿದೆ. ಜನವರಿ 14 ರಂದು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ. ಜನವರಿ 19 ರಂದು ಡಾ. ಲೊಕೇಶ್ ರನ್ನು ಅಮಾನತು ಮಾಡಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಹಿಮ್ಸ್ ಆಡಳಿತ ಮಂಡಳಿ ಉಪಾಧ್ಯಕ್ಷ ನವೀನ್ ರಾಜ್ ಸಿಂಗ್ ಅವರು ಹಾಸನ ಹೆಚ್ಚುವರಿ ಡಿಸಿ ಕವಿತಾ ರಾಜಾರಾಂ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂರು ವಾರದವರೆಗೂ ತನಿಖೆ ನಡೆಸಲು ಗಡುವು ನೀಡಲಾಗಿದೆ ಎಂದು ಹಾಸನ ಎಡಿಸಿ ಕವಿತಾ ರಜಾರಾಂ ತಿಳಿಸಿದ್ದಾರೆ.