ಶಾಲೆ ಮೆಟ್ಟಿಲು, ರಸ್ತೆಯಲ್ಲೆಲ್ಲಾ Sorry, Sorry ಬರಹ!

85
firstsuddi

ಬೆಂಗಳೂರು : ನಗರದ ಶಾಲೆಯೊಂದರ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯಲ್ಲೆಲ್ಲಾ Sorry, Sorry ಎಂದು ಬರೆಯಲಾಗಿದೆ.

ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ತಡರಾತ್ರಿ ಹುಚ್ಚಾಟ ಮೆರೆಯಲಾಗಿದ್ದು, ಸ್ಕೂಲ್ ನ ಕಾಂಪೌಂಡ್, ರಸ್ತೆ, ಮನೆಯ ಕಾಪೌಂಡ್ ಗಳು ಹೀಗೆ ಎಲ್ಲಾ ಕಡೆ Sorry, Sorry ಎಂದು ಬರೆಯಲಾಗಿದೆ. ಇಂದು ಬೆಳಗ್ಗೆ ಇದನ್ನು ಕಂಡ ಸ್ಥಳೀಯರಿಗೆ ಶಾಕ್ ಆಗಿದೆ. ಇತ್ತ ಪೊಲೀಸರು Sorry ಬರೆದವನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.