ಕಾನ್ಪುರ: ಶಿಕ್ಷಕಿಯ ಪ್ರಿಯಕರನೊಬ್ಬ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯ ಆಧರಿಸಿ ಟೀಚರ್‌ನ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ವಿದ್ಯಾರ್ಥಿಯೊಬ್ಬ ಪ್ರತಿ ದಿನ ರಚಿತಾ ಎಂಬ ಟೀಚರ್ ಬಳಿ ಟ್ಯೂಷನ್‌ಗೆ ತೆರಳುತ್ತಿದ್ದ. ರಚಿತಾಗೆ, ಒಬ್ಬ ಬಾಯ್‌ಫ್ರೆಂಡ್ ಇದ್ದ. ಇವರಿಬ್ಬರ ಲವ್ವಿ ಡವ್ವಿ ಸಾಗುತ್ತಿತ್ತು. ಇತ್ತ ಬಾಲಕ ಪ್ರತಿ ದಿನ ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ. ಹೀಗೆ ಟ್ಯೂಷನ್‌ಗೆ ತೆರಳಿದ ಬಾಲಕ ಮರಳಿ ಮನೆಗೆ ಬರಲಿಲ್ಲ. ಹೀಗಾಗಿ ಪೋಷಕರು ಹುಡುಕಾಟ ಆರಂಭಿಸಿದ್ದರು. ಇತ್ತ ಪೊಲೀಸರಿಗೆ ದೂರು ನೀಡಿದ್ದರು.
ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಈ ವೇಳೆ ಬಾಲಕನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯ ಮಾಹಿತಿ ಬಹಿರಂಗವಾಗಿದೆ. ಇತರ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ ವೀಕ್ಷಿಸಲಾಗಿದೆ. ಈ ವೇಳೆ ಬಾಲಕನನ್ನು ವ್ಯಕ್ತಿಯೊಬ್ಬ ಟ್ಯೂಷನ್ ರೂಂಗಿಂತ ಮೊದಲೇ ಸಿಗುವ ಸ್ಟೋರ್ ರೂಂಗೆ ಕರೆದುಕೊಂಡು ಹೋದ ದೃಶ್ಯಗಳು ಲಭ್ಯವಾಗಿದೆ.
ಸ್ಟೋರ್ ರೂಂ ಹೋದ ಬಾಲಕ ಹಾಗೂ ವ್ಯಕ್ತಿ ಕೆಲ ಹೊತ್ತ ಯಾವುದೇ ಸುಳಿವು ಇರಲಿಲ್ಲ. ಬಳಿಕ ಸ್ಟೋರ್‌ನಿಂದ ವ್ಯಕ್ತಿ ಮಾತ್ರ ಹೊರಬಂದಿದ್ದಾನೆ. ಬೇರೊಂದು ಶರ್ಟ್ ಧರಿಸಿ ಸ್ಕೂಟರ್ ಮೂಲಕ ಹೊರಟ್ಟಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ವ್ಯಕ್ತಿಯ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಶಂಕಿತ ವ್ಯಕ್ತಿ ಟ್ಯೂಷನ್ ಟೀಚರ್ ಪ್ರಿಯಕರ್ ಪ್ರಬಾತ್ ಶುಕ್ಲಾ ಅನ್ನೋದು ಬಹಿರಂಗವಾಗಿದೆ. ಪ್ರಕರಣದಲ್ಲಿ ಪ್ರಭಾತ್, ರಚಿತಾ ಮತ್ತು ಅವರ ಪ್ರಿಯಕರ ಆರ್ಯನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ 17ರ ಬಾಲಕನ ತಂದೆ ಉದ್ಯಮಿಯಾಗಿದ್ದಾರೆ. ಕೊಲೆಗೂ ಮುನ್ನ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಘಟನೆಯೂ ನಡೆದಿದೆ. ಹಣಕ್ಕಾಗಿ ಬಾಲಕನ ಅಪಹರಿಸಿ ಕೊಲೆಗೈದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.










