ಶಿವಸೇನೆ ನಾಯಕ ಸಂಜಯ್ ರಾವುತ್‌ಗೆ ಜಾಮೀನು…

80
firstsuddi

ಮುಂಬೈ : ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನೆ ನಾಯಕ ಸಂಜಯ್ ರಾವುತ್ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯವು ಇಂದು ಜಾಮೀನು ನೀಡಿದೆ. ರಾಜ್ಯಸಭಾ ಸದಸ್ಯರಾಗಿರುವ ಫೈರ್ ಬ್ರಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ರಾವುತ್, ಕಳೆದ ಮೂರೂವರೆ ತಿಂಗಳಿನಿಂದ ಜೈಲಿನಲ್ಲಿದ್ದರು.

ಸಂಜಯ್ ರಾವತ್ ಅವರೊಂದಿಗೆ ಅವರ ಸಹಾಯಕ ಹಾಗೂ ಪ್ರಮುಖ ಆರೋಪಿಯಾಗಿರುವ ಪ್ರವೀಣ್ ರಾವತ್ ಅವರನ್ನೂ ಇಡಿ ಬಂಧಿಸಿದ್ದು, ನ್ಯಾಯಾಲಯದಿಂದ ಅವರು ಕೂಡಾ ಜಾಮೀನು ಪಡೆದಿದ್ದಾರೆ. ಅಧಿಕಾರ ದುರ್ಬಳಕೆ ಮತ್ತು ರಾಜಕೀಯ ದ್ವೇಷಕ್ಕೆ ತಾವು ಬಲಿಯಾಗಿರುವುದಾಗಿ ರಾವುತ್ ಜಾಮೀನು ಮನವಿಯಲ್ಲಿ ಉಲ್ಲೇಖಿಸಿದ್ದರು.