ಸತತ ಹತ್ತನೇ ಬಾರಿ ರೆಪೊ ದರದಲ್ಲಿ ಯಥಾಸ್ಥಿತಿ ಮುಂದುವರಿಕೆ…

82
firstsuddi

ನವದೆಹಲಿ : ಸತತ ಹತ್ತನೇ ಬಾರಿಗೆ ದೇಶದ ಕೇಂದ್ರ ಬ್ಯಾಂಕ್ ಆರ್ ಬಿಐ ತನ್ನ ಪ್ರಮುಖ ಬಡ್ಡಿದರಗಳಾದ ರೆಪೋ ಹಾಗು ರಿವರ್ಸ್ ರೆಪೋದಲ್ಲಿ ಯಥಾಸ್ಥಿತಿ ಮುಂದುವರಿಸಿದೆ.

ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ರೆಪೊ ದರ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರ ಶೇಕಡಾ 3.35ರಷ್ಟು ಮುಂದುವರಿಯಲಿದೆ. ದೇಶದ ಆರ್ಥಿಕಾಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.

ದೇಶದಲ್ಲಿ ಹಣಕಾಸು ವರ್ಷ 2022ರಲ್ಲಿ ಸಗಟು ಹಣದುಬ್ಬರ ದರವು ಶೇ 5.3ರಷ್ಟಿರಲಿದ್ದು, 2022-23ರಲ್ಲಿ ಶೇ 4.5ರಷ್ಟಿರಲಿದೆ ಎಂದು ಆರ್ ಬಿಐ ಅಂದಾಜಿಸಿದೆ.

ರೆಪೊ ದರ ಎಂದರೇನು? : ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವೇ ರೆಪೊ ದರವಾಗಿದೆ.