ಸಿಂಗಾಪುರ ಮೃಗಾಲಯದ ನಾಲ್ಕು ಸಿಂಹಗಳಿಗೆ ಕೋವಿಡ್ ಪಾಸಿಟಿವ್…

59
firstsuddi

ಸಿಂಗಾಪುರ : ಇಲ್ಲಿನ ಮಂಡೈ ವೈಲ್ಡ್ ಲೈಫ್ ಗ್ರೂಪ್ ಮೃಗಾಲಯದಲ್ಲಿರುವ ನಾಲ್ಕು ಏಷ್ಯಾಟಿಕ್ ಸಿಂಹಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಈ ನಾಲ್ಕು ಸಿಂಹಗಳು ಶನಿವಾರ ಕೆಮ್ಮು, ಸೀನು ಮತ್ತು ಆಲಸ್ಯ ಸೇರಿದಂತೆ ಕೊರೊನಾದ ಲಕ್ಷಣಗಳನ್ನು ಹೊಂದಿದ್ದವು. ಈ ಹಿನ್ನೆಲೆ ಅವುಗಳನ್ನು ಕೋವಿಡ್ ಪರೀಕ್ಷೆಗೆ ಬಳಪಡಿಸಲಾಗಿತ್ತು. ಈ ವೇಳೆ ಅವುಗಳಿಗೆ ಪಾಸಿಟಿವ್ ಬಂದಿರುವುದು ಗೊತ್ತಾಗಿದ್ದು, ಮೃಗಾಲಯದಲ್ಲಿರುವ 9 ಏಷ್ಯಾಟಿಕ್ ಸಿಂಹಗಳು ಮತ್ತು 5 ಆಫ್ರಿಕನ್ ಸಿಂಹಗಳನ್ನು ಆಯಾ ಗುಹೆಗಳಲ್ಲಿ ಪ್ರತ್ಯೇಕಿಸಲು ಮಂಡೈ ವೈಲ್ಡ್ ಲೈಫ್ ಗ್ರೂಪ್ ಗೆ ಪ್ರಾಣಿ ಮತ್ತು ಪಶುವೈದ್ಯಕೀಯ ಸೇವೆ(ಎವಿಎಸ್) ತಿಳಿಸಿದೆ.

ಮಂಡೈ ವೈಲ್ಡ್ ಲೈಫ್ ಗ್ರೂಪ್ ನ ಮೃಗಾಲಯದ ನಾಲ್ಕು ಏಷ್ಯಾಟಿಕ್ ಸಿಂಹಗಳು ಕೋವಿಡ್ ಸೋಂಕಿತ ಸಿಬ್ಬಂದಿಯೊಂದಿಗೆ ಸಂಪರ್ಕ ಹೊಂದಿದ್ದು, ಪರಿಣಾಮ ಇವುಗಳಿಗೂ ಕೊರೊನಾ ಬಂದಿದೆ ಎಂದು ಸಂಶೋಧನೆ ಮತ್ತು ಪಶುವೈದ್ಯಕೀಯ ಉಪಾಧ್ಯಕ್ಷ ಡಾ.ಸೋಂಜಾ ಲುಜ್ ತಿಳಿಸಿದ್ದಾರೆ.