ಸಿಇಟಿ ವಿದ್ಯಾರ್ಥಿಗಳಿಗೆ 2 ಲಕ್ಷ ಸರ್ಜಿಕಲ್ ಮಾಸ್ಕ್ – ಅಶ್ವಥ್ ನಾರಾಯಣ್ ಅವರಿಗೆ ಹಸ್ತಾಂತರ…

88
firstsuddi

ಬೆಂಗಳೂರು : ಈ ವರ್ಷ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ವಿದ್ಯಾರ್ಥಿಗಳಿಗೆ ಕೋವಿಡ್ ರಕ್ಷಣೆಗಾಗಿ ನಗರದ ಬನ್ನೇರುಘಟ್ಟ ರಸ್ತೆಯ ರೈನ್ ಬೋ ಆಸ್ಪತ್ರೆ ಹಾಗೂ ಎಇಎಸ್ (ಅಡ್ವಾನ್ಸ್ಡ್ಎಜ್ಯುಕೇಷನಲ್ ಸರ್ವೀಸ್) ಸಂಸ್ಥೆ ಸೇರಿ 2 ಲಕ್ಷ ಸರ್ಜಿಕಲ್ ಮಾಸ್ಕ್ ಗಳನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಕೊಡುಗೆಯಾಗಿ ನೀಡಿವೆ.

ನಗರದಲ್ಲಿಂದು ಈ ಸಂಸ್ಥೆಗಳ ಉನ್ನತ ಪ್ರತಿನಿಧಿಗಳು ಸಾಂಕೇತಿಕವಾಗಿ ಸರ್ಜಿಕಲ್ ಮಾಸ್ಕ್ ಗಳನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್ ಅವರು, ಕೋವಿಡ್ ವಿರುದ್ಧದ ಹೋರಾಟಕ್ಕೆ ಖಾಸಗಿ ಆಸ್ಪತ್ರೆಗಳು ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಇದು ಅತ್ಯಂತ ಸಂತಸದ ಸಂಗತಿ. ಅದರಲ್ಲೂ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರೈನ್ ಬೋ ಆಸ್ಪತ್ರೆ, ಬ್ರೈಟ್ ರೈಟ್ ಹಾಗೂ ಎಇಎಸ್ ಸಂಸ್ಥೆಗಳು ಸರ್ಜಿಕಲ್ ಮಾಸ್ಕ್ ಗಳನ್ನು ದಾನ ಮಾಡಿರುವುದು ಸಾರ್ಥಕ ಕಾರ್ಯ ಎಂದರು.