ವಿಜಯಪುರ: ನಿಷೇಧಿತ ಸಿಡಿ ಆಚರಣೆ ವೇಳೆ ಮೇಲಿಂದ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇಗುಲದಲ್ಲಿ ನಡೆದಿದೆ.
ಲಕ್ಷ್ಮೀಬಾಯಿ ಪೂಜಾರಿ ಮೃತ ಮಹಿಳೆ. ಇನ್ನು ಮಹಿಳೆ ಕೆಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಇಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಸಿಡಿ ಆಚರಣೆ ?
ಸಿಡಿ ಆಚರಣೆಯು ಮೌಢ್ಯಾಚರಣೆಯ ವ್ಯಾಪ್ತಿಯಲ್ಲಿ ಬರುವ ಆಚರಣೆಯಾಗಿದೆ. ಭಕ್ತರು ಹರಕೆ ತೀರಿಸುವ ಸಲುವಾಗಿ ತಮ್ಮ ಬಾಯಿ ಮತ್ತು ಬೆನ್ನಿಗೆ ಕಬ್ಬಿಣದ ಸಲಾಕೆಗಳನ್ನು ಚುಚ್ಚಿಕೊಂಡು ಮೇಲಕ್ಕೆ ಎತ್ತಿ ಸುತ್ತಿಸಲಾಗುತ್ತದೆ. ಈ ಸೇವೆಯನ್ನು ನಿಷೇಧಿಸಲಾಗಿದೆಯಾದರೂ, ಪ್ರತಿ ಶುಕ್ರವಾರ ಸಿಡಿ ಆಚರಣೆ ನಡೆಯುತ್ತದೆ.










