ಸುಪ್ರೀಂ ಕೋರ್ಟ್‍ಗಿಂತ ನಾನು ದೊಡ್ಡವನಲ್ಲ : ರಮೇಶ್ ಕುಮಾರ್…

243
firstsuddi

ಕೋಲಾರ : ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಇಂದು ನಡೆದ ವಾದ ಪ್ರತಿವಾದವನ್ನು ಕೇಳಿ ಪ್ರತಿಕ್ರಯಿಸಿದ ಅವರು ನಾಳೆ ಕೋರ್ಟ್ ತೀರ್ಪು ನೀಡಿದ ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ. ಸುಪ್ರೀಂ ಕೋರ್ಟ್‍ಗಿಂತ ನಾನು ದೊಡ್ಡವನಲ್ಲ. ಇಂದು ವಾದ ಪ್ರತಿವಾದಗಳು ನಡೆದಿದೆ. ನಾಳೆ ಅಂತಿಮವಾಗಿ ತೀರ್ಪು ಬರುವವರೆಗೂ ನಾನು ಮಾತನಾಡುವುದಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಾನು ನಿರ್ವಹಿಸುತ್ತಿದ್ದೇನೆ. ನಾನು ಯಾರಿಗೂ ಸವಾಲ್ ಹಾಕಿಲ್ಲ. ನಾನು ಯಾರಾ ಜೊತೆಗೂ ತರಾಟೆಗೂ ಹೋಗಿಲ್ಲ. ಇದು ಸುಪ್ರೀಂ ಕೋರ್ಟ್ ಹಾಗೂ ನನ್ನ ನಡುವಿನ ಸಂಘರ್ಷ ಅಲ್ಲ ಎಂದು ಹೇಳಿದರು.