ಸೃಜನ್ ಲೋಕೇಶ್ ಟೀಂ ಮತ್ತು ಸಚಿವ ವಿ.ಸೋಮಣ್ಣ ಪುತ್ರನ ನಡುವೆ ಗಲಾಟೆ?

67
firstsuddi

ನಟ ಸೃಜನ್ ಲೋಕೇಶ್ ಟೀಂ ಮತ್ತು ಸಚಿವ ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ತಡರಾತ್ರಿ ಬೆಂಗಳೂರಿನ ಮುದ್ದಿನಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಅಪ್ಪು ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆ ಸೃಜನ್ ಲೋಕೇಶ್ ಟೀಂ ಪ್ರಾಕ್ಟೀಸ್ ಮಾಡಿ ನಂತರ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಕೂಡ ಆಗಿದೆ ಎನ್ನಲಾಗಿದೆ. ಆದರೆ ಯಾರೂ ದೂರು ನೀಡಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಅರುಣ್ ಸೋಮಣ್ಣ, ನಾನು ನಟ ಸೃಜನ್ ಲೋಕೇಶ್ ರನ್ನು ನೇರವಾಗಿ ನೋಡಿಯೇ ಇಲ್ಲ. ಜೀವನದಲ್ಲಿ ಎಂದೂ ಸೃಜನ್ ಲೋಕೇಶ್ ಭೇಟಿಯಾಗಿಲ್ಲ. ಕಿಂಗ್ಸ್ ಕ್ಲಬ್ ನಲ್ಲಿ ನಾವು ಯಾರ ಜೊತೆಗೂ ಗಲಾಟೆ ಮಾಡಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.