ಸೇನಾ ಶಿಬಿರಗಳ ದಾಳಿ ನಡೆಸಲು ಸಂಚು ರೂಪಿಸಿದ 8ಮಂದಿ ಲಷ್ಕರ್ ಉಗ್ರರ ಬಂಧನ…

322
firstsuddi

ಶ್ರೀನಗರ : ಕಾಶ್ಮೀರದ ಸೇನಾ ಶಿಬಿರ ಹಾಗೂ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನದ ಲಷ್ಕರ್-ಎ-ತೊಯಿಬಾ ಉಗ್ರ ಸಂಘಟನೆಯ 8 ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮ ಕಾಶ್ಮೀರದಲ್ಲಿ ಉಗ್ರರು ಶಾಂತಿ ಕದಡುವ ಯತ್ನ ನಡೆಸುತ್ತಿದ್ದು, ಪುಲ್ವಾಮಾ ಮಾದರಿಯ ದಾಳಿಗೆ ಸಂಚು ರೂಪಿಸಿದ ಪಾಕ್ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದವರನ್ನು ಕಂಡು ಕಾಶ್ಮೀರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಅವರು ಲಷ್ಕರ್-ಎ-ತೊಯಿಬಾ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ತಿಳಿದು ಬಂದಿದ್ದು, ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಪ್ರಮುಖ ಸ್ಥಳಗಳ ನಕ್ಷೆಗಳನ್ನು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.