ವಾಷಿಂಗ್ಟನ್ : ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ವಿಶ್ವದ ಅತಿ ದೊಡ್ಡ ಕಾಫಿ ಉತ್ಪನ್ನ ಕಂಪನಿ ಸ್ಟಾರ್‌ಬಕ್ಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಗಿದೆ.
ಲಕ್ಷ್ಮಣ್ ನರಸಿಂಹನ್ ಸ್ಟಾರ್‌ಬಕ್ಸ್ ಕಂಪನಿಯ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಟಾರ್‌ಬಕ್ಸ್ ನಿರ್ದೇಶಕರ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಸ್ಟಾರ್‌ಬಕ್ಸ್ ನಿನ್ನೆ ಘೋಷಿಸಿದೆ. ಲಕ್ಷ್ಮಣ್ ನರಸಿಂಹನ್ ಅವರು ಅಕ್ಟೋಬರ್ 1 ರಂದು ಸ್ಟಾರ್‌ಬಕ್ಸ್ ಗೆ ಸಿಇಒ (3 ವರ್ಷಗಳ ಅವಧಿಗೆ) ಆಗಿ ನೇಮಕಗೊಳ್ಳಲಿದ್ದಾರೆ. ಅಲ್ಲಿಯವರೆಗೆ ಹಂಗಾಮಿ ಸಿಇಒ ಹೋವರ್ಡ್ ಸ್ಕುಲ್ಟ್ಜ್ ಕಂಪನಿಯನ್ನು ಮುನ್ನಡೆಸಲಿದ್ದಾರೆ.
55 ವರ್ಷದ ಲಕ್ಷ್ಮಣ್ ನರಸಿಂಹನ್ ಅವರು ಈ ಹಿಂದೆ ಬಹುರಾಷ್ಟ್ರೀಯ ಗ್ರಾಹಕ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಕಂಪನಿಯಾದ ಇಂಗ್ಲೆಂಡ್ ಮೂಲದ ರೆಕಿಟ್ ಬೆನ್ ಕೈಸರ್ ನ ಸಿಇಒ ಆಗಿದ್ದರು.










