ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿಯನ್ನು ನೇಮಿಸಿ : ಬ್ಯಾಂಕುಗಳಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ…

51
firstsuddi

ಮುಂಬೈ: ಬ್ಯಾಂಕುಗಳು ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.

ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕುಗಳ ಸಂಘದ  75ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ವ್ಯವಹಾರ ಮಾಡಲು ಅಲ್ಲಿರುತ್ತೀರಿ. ನೀವು ನಾಗರಿಕರಿಗೆ ಕೆಲವು ಮೌಲ್ಯ ವ್ಯವಸ್ಥೆಯನ್ನು ವೃದ್ಧಿಸಲು ಅಲ್ಲಿಗೆ ಹೋಗಿರುವುದಿಲ್ಲ ಎಂದು ಹೇಳಿದ್ದಾರೆ.

ಶಾಖಾ ಮಟ್ಟದಲ್ಲಿ ಪ್ರಾದೇಶಿಕ ಭಾಷೆ ಮಾತನಾಡದ ಸಿಬ್ಬಂದಿಯನ್ನು ನೀವು ಹೊಂದಿದ್ದು, ‘ಹೇ, ನೀವು ಹಿಂದಿ ಮಾತನಾಡುವುದಿಲ್ಲ, ಬಹುಶಃ ನೀವು ಭಾರತೀಯರಲ್ಲ ಎಂದು ಹೇಳುವಷ್ಟು ದೇಶಭಕ್ತರಾಗಿದ್ದರೆ, ನನ್ನ ಪ್ರಕಾರ ಅದು ವ್ಯವಹಾರಕ್ಕೆ ಯಾವುದೇ ರೀತಿ ಒಳಿತು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಶಾಖೆಗಳಲ್ಲಿ ಹುದ್ದೆಗೆ ನಿಯೋಜಿಸುವ ಸಿಬ್ಬಂದಿಯನ್ನು ಬ್ಯಾಂಕುಗಳು ಪರಾಮರ್ಶೆಗೆ ಒಳಪಡಿಸಬೇಕು. ಸ್ಥಳೀಯ ಭಾಷೆಯನ್ನು ಮಾತನಾಡಲಾಗದ ಸಿಬ್ಬಂದಿಯನ್ನು ಗ್ರಾಹಕರ ಜತೆ ವ್ಯವಹರಿಸುವ ಕೆಲಸಗಳಿಗೆ ನಿಯೋಜಿಸದಂತೆ ನೋಡಿಕೊಳ್ಳಬೇಕು. ಜನರ ನೇಮಕಾತಿ ವೇಳೆ ನೀವು ಸಾಕಷ್ಟು ಸೂಕ್ಷ್ಮ ಮಾರ್ಗಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಗ್ರಾಹಕರ ಕೆಲಸಗಳನ್ನು ಸುಗಮಗೊಳಿಸುವುದರಲ್ಲಿ ಬ್ಯಾಂಕುಗಳು ಸಕಾರಾತ್ಮಕತೆಯ ಶಕ್ತಿಯನ್ನು ಉತ್ತೇಜಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.