ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು ಅಂತ ಕೇಸ್ ಸಿಐಡಿಗೆ ವಹಿಸಲಾಗಿದೆ : ಆರಗ ಜ್ಞಾನೇಂದ್ರ

57
firstsuddi

ಬೆಂಗಳೂರು : ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು ಅಂತ ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಕೇಸನ್ನು ಮೈಸೂರು ಪೊಲೀಸರು ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು. ಯಾವುದೇ ಅನುಮಾನ ಕೇಸ್ ನಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ ಎಂದರು.

ಪಿಎಸ್ಐ ಕೇಸ್ ತನಿಖೆ ಮಾಡಿದ ತಂಡವೇ ಈ ಕೇಸ್ ತನಿಖೆ ಮಾಡುತ್ತದೆ. ತನಿಖೆ ಪ್ರಾಮಾಣಿಕವಾಗಿ ನಡೆದು ತಪ್ಪಿತಸ್ಥರಿಗೆ ಕ್ರಮ ಆಗುವಂತೆ ಕ್ರಮ ಆಗಬೇಕು ಅಂತ ಸೂಚನೆ ನೀಡಿದ್ದೇವೆ. ಸ್ಯಾಂಟ್ರೋ ರವಿ ಮೇಲೆ ಅತ್ಯಾಚಾರ, ಕೊಲೆ, ಕಿರುಕುಳ, ವರದಕ್ಷಿಣೆ ಸೇರಿ ಅನೇಕ ಪ್ರಕಣಗಳು ಇವೆ. ಇದರ ಸಂಪೂರ್ಣ ತನಿಖೆ ಆಗಲಿದೆ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣ ಇದು. ಇದರ ಹಿಂದೆ ಯಾರು ಯಾರು ಇದ್ದಾರೆ ಅಂತ ಗೊತ್ತಾಗಬೇಕು. ಯಾರು ಯಾರು ಸ್ಯಾಂಟ್ರೋ ರವಿ ಜೊತೆ ಇದ್ದರೊ ಅವರ ಮುಖವಾಡ ಕಳಚಿ ಹೊರಗೆ ತೆಗೆಯಬೇಕು. 20 ವರ್ಷದ ಹಿಂದೆ ಯಾ ಜೊತೆ ಸಂಬಂಧ ರವಿ ಇಟ್ಟಿದ್ದ ಅಂತ ಜನರಿಗೆ ಗೊತ್ತಾಗಬೇಕು. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದರು.

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ಕೊಡುವುದಕ್ಕೆ ದಾಖಲೆ ಇಲ್ಲ ಎಂಬ ರವಿ ಪರ ವಕೀಲರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಮಾಡಿದರೂ ಕಷ್ಟ ಮಾಡದೇ ಹೋದರೂ ಕಷ್ಟ. ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ ತನಿಖೆ ಆಗುತ್ತೆ. ಯಾರೇ ತಪ್ಪು ಮಾಡಿದ್ರು ಕ್ರಮ ಆಗೇ ಆಗುತ್ತದೆ ಅಂತ ತಿಳಿಸಿದರು.