ಹಜ್ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತ ; 20 ಜನರು ಸಾವು…

51
firstsuddi

ರಿಯಾದ್ : ಮೆಕ್ಕಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ 20 ಮಂದಿ ಮೃತಪಟ್ಟಿದ್ದು, 29ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ದಕ್ಷಿಣ ಪ್ರಾಂತ್ಯದ ಅಸಿರ್ ನಲ್ಲಿ ಘಟನೆ ನಡೆದಿದೆ. ಮುಸ್ಲಿಮರಿಗೆ ಮೆಕ್ಕಾ ಮದೀನಾ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಇಲ್ಲಿಗೆ ಹೋಗುತ್ತಾರೆ. ನಿನ್ನೆ ಪವಿತ್ರ ನಗರವಾದ ಮೆಕ್ಕಾಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆಯಲ್ಲಿ ಹೋಗುತ್ತಿದ್ದಾಗ ಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಈ ವೇಳೆ ಭಾರೀ ಬೆಂಕಿ ಸಂಭವಿಸಿದ್ದು, ಜನರ ಸಾವಿಗೆ ಕಾರಣವಾಗಿದೆ.

ಸಾವನ್ನಪ್ಪಿರುವವರಲ್ಲಿ ಹಲವರು ಬೇರೆ ಬೇರೆ ದೇಶಗಳಿಂದ ಬಂದಿರುವವರು ಎಂಬುದು ತಿಳಿದುಬಂದಿದೆ. ಆದರೆ ಅವರ ಗುರುತುಗಳನ್ನು ಇನ್ನೂ ತಿಳಿಸಲಾಗಿಲ್ಲ. ಅಕ್ಟೋಬರ್ 2019 ರಲ್ಲಿ, ಮದೀನಾದಲ್ಲಿ ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸುಮಾರು 35 ವಿದೇಶಿಗರು ಸಾವನ್ನಪ್ಪಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು.