ಹಣದ ಆಸೆಗಾಗಿ ನಾನು ರಾಜೀನಾಮೆಯನ್ನು ನೀಡಿಲ್ಲ : ಎಂಟಿಬಿ ನಾಗರಾಜ್…

271
firstsuddi

ಬೆಂಗಳೂರು : ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿದ್ದ 14ಮಂದಿ ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದು, ಬಳಿಕ ಬೆಂಗಳೂರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ನಾವೆಲ್ಲರೂ ಅನರ್ಹಗೊಳ್ಳುತ್ತೇವೆ ಎಂದು ನಮಗೆ ಮೊದಲೇ ಗೊತ್ತಿತ್ತು. ನಮ್ಮ ಮುಖಂಡರೇ ನಮಗೆ ದ್ರೋಹ ಮಾಡಿದ್ದಾರೆ. ನಮ್ಮ ಅನರ್ಹತೆಗೆ ಯಾರೂ ಕಾರಣವೆಂದು ಮುಂದಿನ 3ದಿನಗಳಲ್ಲಿ ಸುದ್ದಿಗೋಷ್ಟಿ ನಡೆಸಿ ಎಲ್ಲವನ್ನೂ ತಿಳಿಸುತ್ತೇನೆ. ನಾನು ರಾಜೀನಾಮೆ ನೀಡಲು ಏನೂ ಕಾರಣ ಎಂಬುವುದನ್ನೂ ಕೂಡಾ ತಿಳಿಸುತ್ತೇನೆ. ನಮ್ಮ ಅನರ್ಹತೆ ಬಗ್ಗೆ ನಾವು ಸುಪ್ರೀಂ ಮೊರೆ ಹೋಗುತ್ತೇವೆ. ನಾನು ನನ್ನ ಕ್ಷೇತ್ರದ ಜನರ ಹಾಗೂ ಮುಖಂಡರ ತೀರ್ಮಾನವನ್ನು ತೆಗೆದುಕೊಂಡು ಮುಂದಿನ ನಡೆ ತೆಗೆದುಕೊಳ್ಳುತ್ತೇನೆ. ನಾನು ಜನರ ಸೇವೆ ಮಾಡಬೇಕೆಂದು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಬೇಕಾದಷ್ಟು ಹಣವನ್ನು ಆ ದೇವರು ನೀಡಿದ್ದಾನೆ. ಹಣದ ಆಸೆಗಾಗಿ ನಾನು ರಾಜೀನಾಮೆಯನ್ನು ನೀಡಿಲ್ಲ. ಅಲ್ಲದೇ ನಾವು ಯಾವಾ ಪಕ್ಷವನ್ನು ಕೂಡಾ ಸೇರಲು ನಿರ್ಧಾರ ಮಾಡಿಲ್ಲ ಎಂದರು.