ವಿಜಯಪುರ : ಇಂದು ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಪ್ರಕ್ರಿಯೆ ಆರಂಭವಾಗಿದೆ.
ಹಾನಗಲ್ ಉಪ ಚುನಾವಣೆಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಮತದಾನ ನಡೆಯಲಿದೆ. 1,05,525 ಪುರುಷರು, 98,953 ಮಹಿಳೆಯರು, 83 ಸೇವಾ ಮತದಾರರು, ಮೂವರು ಇತರೆ ಮತದಾರರು ಸೇರಿದಂತೆ ಸೇರಿದಂತೆ ಒಟ್ಟು 2.04,564 ಮತದಾರರು ಹಕ್ಕು ಚಲಾಯಿಸುತ್ತಾರೆ. ಒಟ್ಟು ಹಾನಗಲ್ ಮತಕ್ಷೇತ್ರದಲ್ಲಿ 263 ಮತಗಟ್ಟೆಗಳು ಸಿದ್ಧವಾಗಿವೆ.
ಇನ್ನು ಸಿಂದಗಿ ವಿಧಾನಸಭಾ ಉಪಚುನಾವಣೆ ಒಟ್ಟು 2,34,584 ಜನರು ಮತದಾನ ಮಾಡಲಿದ್ದಾರೆ. 1,20,844 ಪುರುಷರು, 1,13561 ಮಹಿಳೆಯರು, ಇತರೆ 32 ಮತದಾರರು ಹಾಗೂ 147 ಸರ್ವಿಸ್ ವೋಟರ್ಗಳು ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಸಜ್ಜನರ್, ಕಾಂಗ್ರೆಸ್ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ನಿಂದ ನಿಯಾಜ್ ಶೇಖ್ ಸ್ಪರ್ಧಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರ, ಜೆಡಿಎಸ್ನಿಂದ ನಾಜಿಯಾ ಅಂಗಡಿ, ಕಾಂಗ್ರೆಸ್ ಪಕ್ಷದಿಂದ ಅಶೋಕ್ ಮನಗೂಳಿ ಕಣಕ್ಕಿಳಿದಿದ್ದಾರೆ.










