ಹಾಸನ : ಓಟು ಮಾತ್ರ ಮೋದಿಗೆ ಕೆಲಸ ನಾವು ಮಾಡಬೇಕಾ ಎಂಬ ಸಿಎಂ ಪ್ರಶ್ನೆಗೆ ಸಿ.ಟಿ ರವಿ ವ್ಯಂಗ್ಯ…

282
firstsuddi

ಹಾಸನ : ಓಟು ಮಾತ್ರ ಮೋದಿಗೆ ಕೆಲಸ ನಾವು ಮಾಡಬೇಕ ಎಂಬ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಪ್ರತಿಕ್ರಯಿಸಿದ ಶಾಸಕ ಸಿ.ಟಿ ರವಿ ಅವರು, ಮೋದಿ ಸರ್ಕಾರ ಲಂಚವಿಲ್ಲದೆ ಹಾಗೂ ಜಾತಿ ಭೇದವಿಲ್ಲದೆ ಕೆಲಸವನ್ನು ಮಾಡಿದೆ ಹಾಗಾಗಿ ಜನರು ಮೋದಿ ಅವರಿಗೆ ಓಟ್ ಹಾಕಿದರು. ಆದರೆ ನಮ್ಮ ಮುಖ್ಯಮಂತ್ರಿಗಳು ಸೈನಿಕರನ್ನು ಅವಮಾನಿಸಿದರು. ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿಯ ವಿರೋಧ ಇಲ್ಲ. ಆದರೆ ನಿಮಗೆ ಎರಡು ತಲೆಮಾರು ಅಧಿಕಾರ ನಡೆಸಿದ್ದರೂ ಗ್ರಾಮಗಳ ಸಮಸ್ಯೆಗಳ ಬಗ್ಗೆ ಅರಿವಿಲ್ಲವೇ? ಗ್ರಾಮದ ಸಮಸ್ಯೆ ನಿಮಗೆ ಅರ್ಥವಾಗಿಲ್ಲ ಎಂದರೆ ಇನ್ನೆಷ್ಟು ತಲೆಮಾರು ಅಧಿಕಾರ ನಿಮಗೆ ಬೇಕು? ನಿಮಗೂ ಮೋದಿಗೂ ವ್ಯತ್ಯಾಸ ಏನೆಂದರೆ ಮೋದಿಯವರು ನಾಟಕ ಆಡಲಿಲ್ಲ. ಅತೀ ಹೆಚ್ಚು ಬಾರಿ ಪ್ರಧಾನಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಇದ್ದರೆ ಅದು ಕುಮಾರಸ್ವಾಮಿ. ನಾಮ ಹಾಕಿದವರು ಮುಸ್ಲಿಂ ಬಡಜನತೆಗೆ ಮೋಸ ಮಾಡಿಲ್ಲ. ಟೋಪಿ ಹಾಕಿಕೊಂಡು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಪಕ್ಕದಲ್ಲಿ ಕುಳಿತವರೇ ಮುಸ್ಲಿಂ ಜನತೆಗೆ ಮೋಸ ಮಾಡಿದ್ದಾರೆ. ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಬಡ ಜನತೆ ಪರವಾಗಿ ಇರಬೇಕಿದ್ದ ಜಮೀರ್ ಅಹಮದ್ ಓಡಿ ಹೋದವನ ಪರವಾಗಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.