ಹಾಸನ : ಪ್ರೀತಂಗೌಡ ಆಡಿಯೋ ವೈರಲ್ ವಿಚಾರ ಸತ್ಯಾಂಶವಲ್ಲ : ಎ.ಮಂಜು…

187

ಹಾಸನ : ಶಾಸಕ ಪ್ರೀತಂಗೌಡ ಆಡಿಯೋ ವೈರಲ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ಎ. ಮಂಜು ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಶಾಸಕರಾದ ಬೆಳ್ಳಿ ಪ್ರಕಾಶ್, ಪ್ರೀತಂಗೌಡ ನೇತೃತ್ವದಲ್ಲೇ ಚುನಾವಣೆ ನಡೆಯುತ್ತಿರುವುದು. ನಾನು ಬಿಜೆಪಿಯಿಂದ ಶಾಸಕನಾಗಿದ್ದಾಗ ಶಿವಪ್ಪನವರ ಜೊತೆಯಲ್ಲಿದ್ದೆ. ಈಗಾ ಮತ್ತೆ ಬಿಜೆಪಿಯಲ್ಲಿ ಇದ್ದೇನೆ, ಇಲ್ಲಿಯೇ ಇರುತ್ತೇನೆ. ಈ ಆಡಿಯೋ ಸತ್ಯಾಂಶಕ್ಕೆ ದೂರವಾಗಿದ್ದು, ಕಾರ್ಯಕರ್ತರು ಯಾರು ದೃತಿಗೆಡುವ ಅಗತ್ಯವಿಲ್ಲ. ಕಾರ್ಯಕರ್ತರು ಇದಕ್ಕೆ ಕಿವಿ ಕೊಡಬಾರದು ಇದು ಜೆಡಿಎಸ್ ಮುಖಂಡರ ಪಿತೂರಿ ಎಂದರು.