ಹಾಸನ : ಶಿಕ್ಷಕಿಯ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್.ಕೆ.ಜಿ. ವಿದ್ಯಾರ್ಥಿ…

1296
firstsuddi

ಹಾಸನ : ಶಿಕ್ಷಕಿಯ ಕ್ರೌರ್ಯಕ್ಕೆ 5ವರ್ಷದ ಎಲ್.ಕೆ.ಜಿ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿರುವ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್. ಶಾಲೆಯಲ್ಲಿ ನಡೆದಿದೆ. ಮನಿಷ್ ಕಣ್ಣು ಕಳೆದುಕೊಂಡ ವಿದ್ಯಾರ್ಥಿ ಎನ್ನಲಾಗಿದ್ದು, ಆ.13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಶಿಕ್ಷಕಿ ಗಿರಿಜಾ ಎಂಬುವವರು ವಿದ್ಯಾರ್ಥಿಯ ಕಣ್ಣಿಗೆ ಕಬ್ಬಿಣದ ಸ್ಕೇಲ್‍ನಿಂದ ಹಲ್ಲೆ ಮಾಡಿದ್ದು, ಶಿಕ್ಷಕಿ ಹಲ್ಲೆ ನಡೆಸಿದ ದಿನದಿಂದ ವಿದ್ಯಾರ್ಥಿ ಕಣ್ಣು ನೋವು ಎಂದು ಹೇಳುತ್ತಿದ್ದನು. ಹೀಗಾಗಿ ವಿದ್ಯಾರ್ಥಿಯ ಪೋಷಕರು ಚಿಕಿತ್ಸೆಗಾಗಿ ವೈದ್ಯರ ಬಳಿ ವಿದ್ಯಾರ್ಥಿಯನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಕಣ್ಣಿಗೆ ಗಂಬೀರವಾಗಿ ಹಾನಿಯಾಗಿದೆ ಎಂಬುವುದು ತಿಳಿದು ಬಂದಿದ್ದು, ವಿದ್ಯಾರ್ಥಿಯ ಕಣ್ಣನ್ನು ಬದಲಾಯಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಪೋಷಕರು ಶಿಕ್ಷಕಿಯಿಂದಾಗಿ ನಮ್ಮ ಮಗ ಕಣ್ಣು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದು, ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.