ಹಾಸನ : ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ತಾತನ ಕ್ಷೇತ್ರದಲ್ಲಿ ಪ್ರಜ್ವಲಿಸಲು ಸಜ್ಜಾಗುತ್ತಿರುವ ಪ್ರಜ್ವಲ್ ರೇವಣ್ಣ ಅವರು ಒಟ್ಟು 52282 ಮತಗಳ ಭಾರೀ ಅಂತರದಿಂದ ಮುನ್ನುಗ್ಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಒಂದು ಬಾರಿಯೂ ಮುನ್ನಡೆಯನ್ನೂ ಕಾಣದೆ ಹಿನ್ನಡೆ ಅನುಭವಿಸುತ್ತಿದ್ದು, ಮೈತ್ರಿ ಪಕ್ಷದ ವಿರುದ್ಧ ಸಿಡಿದೆದ್ದು ಬಿಜೆಪಿ ಪಕ್ಷಕ್ಕೆ ಸೇರಿದ್ದ ಎ ಮಂಜು ಅವರಿಗೆ ಆರಂಭದಲ್ಲೇ ಆಘಾತ ಉಂಟಾಗಿದೆ. ಪ್ರತಿ ಹಂತದಲ್ಲೂ ಪ್ರಜ್ವಲ್ ರೇವಣ್ಣ ಅವರು ಮುನ್ನಡೆಯನ್ನು ಸಾಧಿಸುತ್ತಿದ್ದು, ಆರನೇ ಸುತ್ತಿನ ಮತ ಎಣಿಕೆ ವರೆಗೂ ಪ್ರಜ್ವಲ್ ರೇವಣ್ಣ ಅವರು 2,41,241 ಮತ ಹಾಗೂ ಎ ಮಂಜು ಅವರು 1,88,959 ಮತಗಳನ್ನು ಗಳಿಸಿದ್ದಾರೆ.










