ಹಾಸಿಗೆಗೆ ಬೆಂಕಿ ತಗುಲಿ 8ವರ್ಷದ ಬಾಲಕಿ ಸಾವು…

192
firstsuddi

ಬೆಳಗಾವಿ : ಮನೆಗೆ ಬೆಂಕಿ ಬಿದ್ದು 8ವರ್ಷದ ಬಾಲಕಿ ಸಜೀವದಹನವಾಗಿರುವ ಘಟನೆ ಬೆಳಗಾವಿಯ ಅನಗೋಳದಲ್ಲಿ ನಡೆದಿದೆ. ಕಸ್ತೂರಿ(8) ಮೃತ ಬಾಲಕಿ ಎನ್ನಲಾಗಿದ್ದು, ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ದೇವರಿಗೆ ಹಚ್ಚಿದ್ದ ದೀಪ ಹಾಸಿಗೆಗೆ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿಯ ತಂದೆ ತಾಯಿ ಪ್ರಾಣಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.