ಹಿಜಬ್‍ಗಾಗಿ ಮತ್ತೆ ಹೋರಾಟಕ್ಕಿಳಿದ ವಿದ್ಯಾರ್ಥಿನಿಯರು…

63
firstsuddi

ಉಡುಪಿ : ಹಿಜಬ್ ನಮ್ಮ ಧಾರ್ಮಿಕ ಹಕ್ಕು, ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತು ಕೊಳ್ಳಲು ಅವಕಾಶ ಮಾಡಿಕೊಡಿ ಎಂದು ನಗರದ ಮಹಿಳಾ ಸರ್ಕಾರಿ ಪಿಯು ಕಾಲೇಜ್ ಮುಂದೆ ಪ್ಲೇ ಕಾರ್ಡ್ ಹಿಡಿದು ವಿದ್ಯಾರ್ಥಿನಿಯರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ.

ಮಹಿಳಾ ಕಾಲೇಜ್ ಆದರೂ ಪುರುಷ ಪ್ರಾಧ್ಯಾಪಕರು ಇದ್ದಾರೆ. ಕಾರ್ಯಕ್ರಮ ನಡೆಯುವ ವೇಳೆ ಹಲವಾರು ಪುರುಷ ಅತಿಥಿಗಳು ಕಾಲೇಜಿಗೆ ಬರುತ್ತಾರೆ. ನಾವು ಯಾರ ಮುಂದೆ ಹಿಜಬ್ ಇಲ್ಲದೆ ಓಡಾಡುವ ಹಾಗಿಲ್ಲ. ನಮಗೆ ಹಿಜಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಡಿ. ನಮಗೆ ಹಿಜಬ್ ಕೂಡ ಮುಖ್ಯ ಶಿಕ್ಷಣ ಕೂಡ ಅಷ್ಟೇ ಮುಖ್ಯ ಮುಖ್ಯವೆಂದು ಪ್ರತಿಭಟನಾನಿರತ ಮುಸಲ್ಮಾನ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್ 27ರಂದು ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಬ್ ಧರಿಸಿ ಬರಲು ಅನುಮತಿ ನೀಡಬೇಕಾಗಿ ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಆದರೆ ಹಿಜಬ್ ಧರಿಸಿ ಕ್ಲಾಸ್ ಗೆ ಬರಲು ಅವಕಾಶ ನೀಡದ ಕಾಲೇಜು ಸಮವಸ್ತ್ರ ಪಾಲಿಸುವಂತೆ ಪಟ್ಟು ಹಿಡಿದಿದೆ. ಹೀಗಾಗಿ ವಿದ್ಯಾರ್ಥಿನಿಯರು ಮತ್ತೆ ಹೋರಾಟ ನಡೆಸಿದ್ದಾರೆ.

ಇನ್ನೂ ಈ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲರು ಪದವಿಪೂರ್ವ ಬೋರ್ಡ್ ಗೆ ಪತ್ರ ಬರೆದಿದ್ದು, ನಿರ್ದೇಶಕರ ಉತ್ತರಕ್ಕಾಗಿ ಕಾಲೇಜು ಆಡಳಿತ ಮಂಡಳಿ ಕಾಯುತ್ತಿದೆ.