ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಬಂದ ಕಾಂಗ್ರೆಸ್ ಶಾಸಕಿ.

99
firstsuddi

ಬೆಂಗಳೂರು : ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜಾ ಫಾತಿಮಾ ಅವರು ಇಂದು ವಿಧಾನಸೌಧಕ್ಕೆ ಹಿಜಾಬ್ ಧರಿಸಿ ಆಗಮಿಸಿದ್ದಾರೆ.

ಈ ಹಿಂದೆ ಹಿಜಬ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ್ದ ಅವರು, ಹಿಜಾಬ್ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಾವು ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ನಾನು ಹಿಜಬ್ ಧರಿಸಿಯೇ ವಿಧಾನ ಸಭೆಗೆ ಹೋಗುತ್ತೇನೆ. ಧೈರ್ಯ ಇದ್ದವರು ನನ್ನ ತಡೆಯಲಿ ಎಂದು ಸವಾಲೊಡ್ಡಿದ್ದರು. ಅದರಂತೆ ಇಂದು ಹಿಜಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಕೂಡ ಖನೀಜ್ ಫಾತಿಮಾ ಹಿಜಾಬ್ ಧರಿಸಿ ಬಂದು ಕಲಾಪದಲ್ಲಿ ಭಾಗಿಯಾಗುತ್ತಿದ್ದರು.