ಹಿಜಾಬ್‍ ಹೋರಾಟಗಾರ್ತಿ ತಂದೆಯ ಹೋಟೆಲ್ ಮೇಲೆ ಕಲ್ಲು ತೂರಾಟ…

90
firstsuddi

ಉಡುಪಿ : ಹಿಜಾಬ್‍ಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲ್ ಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ.

ಮಲ್ಪೆ ಪೇಟೆಯಲ್ಲಿರುವ ಹೈದರ್ ಅಲಿ ಎಂಬುವರ ಬಿಸ್ಮಿಲ್ಲಾ ಹೋಟೆಲ್ ಗೆ ಆಗಮಿಸಿದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ  ಹೊಟೇಲ್ ನಲ್ಲಿ ಇದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾಗಿರುವ ಸೈಫ್ ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.