ಹೊರ ರಾಜ್ಯದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ; ಮೂವರ ಸೆರೆ…

199
firstsuddi

ಮಂಗಳೂರು: ಹೊರ ರಾಜ್ಯದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಕ್ಯಾಲಿಕಟ್ ತಳೇರಿಯನ ಜುನೈಸ್ (36), ಸುರತ್ಕಲ್ ನ ಅಬ್ದುಲ್ ನಝೀರ್ (36) ಮತ್ತು ಎಡಪದವಿನ ನಿಯಾಝ್ (29) ಎಂದು ಗುರುತಿಸಲಾಗಿದೆ.

ಶಕ್ತಿನಗರ ಕ್ರಾಸ್ ಸೌಹಾರ್ದ ಲೇನ್ ಬಳಿ ಅಲ್ ಶಮಾಸ್ ಎಂಬ ಹೆಸರಿನ ಬಾಡಿಗೆ ಮನೆಯಲ್ಲಿ ಹೊರ ರಾಜ್ಯದ ಮಹಿಳೆಯನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಎಕಾನಾಮಿಕ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರಿಗೆ ಬಂದ ಖಚಿತ ಮಾಹಿತಿಯಂತೆ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ. ಕೆ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.