ಹೋಟೆಲ್‍ನಲ್ಲಿ ಫುಡ್ ಸಪ್ಲೈ ಮಾಡಲು ಬಂತು ಲೇಡಿ ರೋಬೋ.

71
firstsuddi

ಮೈಸೂರು : ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ನಗರದ ಸಿದ್ಧಾರ್ಥ ಹೋಟೆಲ್ ಗೆ ವಿಶೇಷವಾದ ರೋಬೋಟ್ ನನ್ನು ತರಿಸಲಾಗಿದೆ. ಈ ರೋಬೋ ಸುಂದರಿ ಇಂದಿನಿಂದ ತನ್ನ ಫುಡ್ ಸರ್ವಿಸ್ ಪ್ರಾರಂಭಿಸಿದೆ.

ಹೋಟೆಲ್ ಮಾಲೀಕರಾದ ಸಿದ್ದಾರ್ಥ್ ಗಿರಿ ಅವರು ದೆಹಲಿಯಿಂದ 2.50 ಲಕ್ಷ ರೂ.ವೆಚ್ಚದಲ್ಲಿ ರೋಬೋ ಯಂತ್ರ ತರಿಸಿದ್ದಾರೆ. ಮೈಸೂರಿನಲ್ಲಿ ಮೊದಲ ಬಾರಿಗೆ ರೋಬೋ ಮೂಲಕ ಸರ್ವಿಸ್ ಕೊಡಿಸುತ್ತಿರುವುದರಿಂದ ಗ್ರಾಹಕರಿಗೂ ಸಹ ಅಚ್ಚರಿಯಾಗಿದೆ.

ಈಗಾಗಲೇ ಲೇಡಿ ರೋಬೋ ಮೈಸೂರು ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೈ ಮಾಡುತ್ತಿದೆ. ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆಗಳ ಕಾಲ ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆ ತನಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ ರೋಬೋ 10 ಕೆ.ಜಿ ಯಷ್ಟು ಭಾರವನ್ನು ಹೊತ್ತು, ನಿಗದಿಸಿದ ಸ್ಥಳಕ್ಕೆ ತಲುಪಿಸಲಿದೆ.

ಮೈಸೂರಿನಲ್ಲಿ ಮೊದಲ ಬಾರಿಗೆ ಈ ವಿನೂತನ ಪ್ರಯತ್ನವನ್ನು ನಗರದ ಹೋಟೆಲ್ ಸಿದ್ಧಾರ್ಥದಲ್ಲಿ ಮಾಡಲಾಗುತ್ತಿದೆ. ಹೋಟೆಲ್ ಗೆ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.