ಬೆಂಗಳೂರು : ಅಮ್ಮನ ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಚೆಕ್ ಮಾಡಿ ಅಪ್ರಾಪ್ತ ಬಾಲಕನೋರ್ವ ಮನೆಬಿಟ್ಟು ಹೋಗಿರುವ ಘಟನೆ ನಗರದ ಆರ್‌ಟಿ ನಗರದಲ್ಲಿ ನಡೆದಿದೆ.
ಆದಿತ್ಯಾ ಮನೆ ಬಿಟ್ಟ ಬಾಲಕನಾಗಿದ್ದು, 9 ನೇ ತರಗತಿ ಓದುತ್ತಿದ್ದಾನೆ. ಈತ ಮೇ. 29 ರಂದು ಕಟ್ಟಿಂಗ್ ಶಾಪ್‍ಗೆಂದು ಮನೆಯಿಂದ ಹೋಗಿದ್ದ. ಮನೆಯಿಂದ ಹೊರಡೋ ಮುನ್ನ ತಾಯಿ ಫೋನ್ ನಲ್ಲಿ ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಆದಿತ್ಯಾ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇತ್ತ ಮಗ ಮಿಸ್ಸಿಂಗ್ ಆದ ಬೆನ್ನಲ್ಲೆ ಪೋಷಕರು ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. ಜೋತಿಷ್ಯದವರ ಮಾತು ಕೇಳಿ ಪೋಷಕರು ಕರಾವಳಿ ಭಾಗಕ್ಕೆ ಮಗನನ್ನ ಹುಡುಕಲು ಹೊರಟಿದ್ದಾರೆ. ಆರ್‌ಟಿ ನಗರ ಸೇರಿದಂತೆ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕಿದೆ. ಆದರೆ ಇನ್ನೂ ಕೂಡ ನಿಖರತೆ ಇಲ್ಲ. ಹಗಲು-ರಾತ್ರಿ ಮೈಸೂರು ಕರಾವಳಿ ಭಾಗದಲ್ಲಿ ಪೊಲೀಸರ ಜೊತೆ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.










