ಬೆಂಗಳೂರು : ಸಾರಿಗೆ ನೌಕರರ ಮುಷ್ಕರವು ಆರನೇ ದಿನವೂ ಮುಂದುವರೆದಿದ್ದು, ಇಂದು ಸಹ ಸಾರಿಗೆ ಬಸ್ ಗಳು ರಸ್ತೆಗಿಳಿಯಲ್ಲ. ಆರನೇ ವೇತನ ಆಯೋಗ ಜಾರಿಗೆ ಹಿನ್ನಲೆ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ತಟ್ಟೆ-ಲೋಟ ಹಿಡಿದು ಚಳುವಳಿ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳು, ತಾಲ್ಲೂಕು ತಹಶಿಲ್ದಾರ್ ಕಚೇರಿ ಮುಂದೆ ತಟ್ಟೆ, ಲೋಟ ಬಡಿದು ಚಳವಳಿ ನಡೆಸಲಿದ್ದಾರೆ. ಸಾರಿಗೆ ಇಲಾಖೆ ನೌಕರರ ಕುಟುಂಬ ಸದಸ್ಯರು ಈ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ.
ಇನ್ನೊಂದೆಡೆ, ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ ಅಂತ್ಯ ಕಾಣದ ಹಿನ್ನೆಲೆ ಸರ್ಕಾರ ನೌಕರರ ವಿರುದ್ಧ ಮತ್ತೊಂದು ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದು 55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಸಲ್ಲಿಸಲು ಬಿಎಂಟಿಸಿ ಸೂಚನೆ ನೀಡಿದ್ದು ಇಂದು ಅದಕ್ಕೆ ಕೊನೆಯ ದಿನವಾಗಿದೆ. ಇಂದು ಸರ್ಟಿಫಿಕೇಟ್ ನೀಡಲು ವಿಫಲವಾದರೆ ಗೇಟ್ ಪಾಸ್ ನೀಡುವುದಾಗಿ ಎಚ್ಚರಿಕೆ ನೀಡಿದೆ.










