ಇಂದಿನಿಂದ ರಾಜ್ಯಾದ್ಯಂತ 14 ದಿನ ಲಾಕ್ ಡೌನ್ ; ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ…

146
firstsuddi

ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ 14 ದಿನ ಬಿಗಿ ಲಾಕ್ ಡೌನ್ ಆರಂಭವಾಗಿದ್ದು, ಮೇ 24 ಬೆಳಗ್ಗೆ 6 ಗಂಟೆವರೆಗೆ ಇಡೀ ರಾಜ್ಯ ಸಂಪೂರ್ಣ ಲಾಕ್ ಆಗಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದ್ದು, ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆ ಅಷ್ಟೇ ಸಮಯ ಇರಲಿದೆ. ಬೆಳಗ್ಗೆ 6 ರಿಂದ 10ಗಂಟೆ ಒಳಗೆ ಬಂದರೆ ಮಾತ್ರ ಅಗತ್ಯವಸ್ತುಗಳು ಸಿಗಲಿದ್ದು, ತಳ್ಳುಗಾಡಿಯಲ್ಲಿ ಸಂಜೆವರೆಗೂ ತರಕಾರಿ ಮಾರಾಟಕ್ಕೆ ಅವಕಾಶ ಇದೆ. ಬೆಳಗ್ಗೆ 10 ಗಂಟೆ ನಂತರ ಹೊರಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಏನಿರುತ್ತೆ?
• ಆಸ್ಪತ್ರೆ, ಮೆಡಿಕಲ್
• ಹಣ್ಣು-ತರಕಾರಿ (ಬೆಳಗ್ಗೆ 10ಗಂಟೆವರೆಗೆ ಮಾತ್ರ)
• ನ್ಯಾಯಬೆಲೆ ಅಂಗಡಿ
• ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ)
• ಹೋಟೆಲ್ ಪಾರ್ಸೆಲ್ (ಇಡೀ ದಿನ )
• ಮದುವೆಗೆ 40 ಜನರಿಗಷ್ಟೇ ಅವಕಾಶ (ಮನೆಯಲ್ಲಿ ಮಾತ್ರ)
• ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ (ಸಂಜೆ 6 ಗಂಟೆಯವರೆಗೆ)
• ದಿನಸಿ-ಮಾಂಸ (ಬೆಳಗ್ಗೆ 10 ಗಂಟೆವರೆಗೆ)
• ಅಂತ್ಯಸಂಸ್ಕಾರ (5 ಜನರಿಗಷ್ಟೇ ಅವಕಾಶ)
• ಮದ್ಯ ಪಾರ್ಸೆಲ್ (ಬೆಳಗ್ಗೆ 10ಗಂಟೆವರೆಗೆ)
• ಹೋಂ ಡೆಲಿವರಿ
• ರೈಲು, ವಿಮಾನ

ಏನಿರಲ್ಲ?
• ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್
• ಅಂತರ್ ಜಿಲ್ಲಾ ಓಡಾಟ
• ಖಾಸಗಿ ವಾಹನಗಳ ಸಂಚಾರ
• ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ
• ಮೆಟ್ರೋ, ಆಟೋ, ಟ್ಯಾಕ್ಸಿ