ಎಚ್ಚರ.. ಇನ್ಮುಂದೆ ಸೀಟ್ ಬೆಲ್ಟ್ ಧರಿಸದಿದ್ದರೆ ಬೀಳುತ್ತೆ ಭಾರೀ ದಂಡ!

55
firstsuddi

ಬೆಂಗಳೂರು : ಇನ್ನು ಮುಂದೆ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ ಭಾರೀ ದಂಡ ಬೀಳಲಿದೆ. ಐದು ನೂರು ರೂಪಾಯಿ ಬದಲು ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 1000 ರೂ. ದಂಡ ವಿಧಿಸಲು ಆದೇಶ ನೀಡಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಆದೇಶ ನೀಡಲಾಗಿದೆ. ರಾಜ್ಯದ ಎಲ್ಲಾ ಕಮೀಷನರೇಟ್ ಮತ್ತು ಎಸ್ ಪಿಗಳಿಗೆ ಆದೇಶ ರವಾನೆಯಾಗಿದೆ.

ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಂಡದ ನಿಯಮ ಜಾರಿಗೆ ತರಲಾಗಿದೆ. ಈ ಮೊದಲು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 500 ರೂ. ದಂಡ ಹಾಕಲಾಗುತ್ತಿತ್ತು. ಇದೀಗ ದಂಡದ ಬೆಲೆ ಏರಿಕೆ ಮಾಡಲಾಗಿದೆ.