ಒಎನ್ ಜಿಸಿ ತೈಲ ಸಂಸ್ಕರಣಾ ಘಟಕದ ಮೂವರು ಉದ್ಯೋಗಿಳ ಅಪಹರಣ…

106
firstsuddi

ಶಿವಸಾಗರ : ಅಸ್ಸೋಂನ ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಸಂಸ್ಥೆಯ ತೈಲ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಉದ್ಯೋಗಿಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಲಖ್ವಾ ಎಂಬಲ್ಲಿ ಅಪಹರಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದುಷ್ಕರ್ಮಿಗಳು ತೈಲ ಸಂಸ್ಕರಣಾ ಘಟಕದ ಇಬ್ಬರು ಸಹಾಯಕ ಜೂನಿಯರ್ ಇಂಜಿನಿಯರ್ ಗಳು ಮತ್ತು ಓರ್ವ ಜೂನಿಯರ್ ಟೆಕ್ನಿಷಿಯನ್ ನ್ನು ಅಪಹರಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನೂ ಈ ಕುರಿತು ಟ್ವೀಟ್ ಮಾಡಿರುವ ಒಎನ್ ಜಿಸಿ, ಇಂದು ಬೆಳಗಿನ ಜಾವ ಒಎನ್ ಜಿಸಿ ಘಟಕದಲ್ಲಿ ಮೂವರು ಉದ್ಯೋಗಿಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಅಪಹರಣಕ್ಕೊಳಗಾದ ನೌಕರರನ್ನು ಒಎನ್ ಜಿಸಿಗೆ ಸೇರಿದ ಕಾರ್ಯಾಚರಣಾ ವಾಹನದಲ್ಲಿಯೇ ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ನಂತರ, ಅಸ್ಸಾಂ-ನಾಗಾಲ್ಯಾಂಡ್ ಗಡಿಯ ಸಮೀಪವಿರುವ ನಿಮೋನಗಢ ಅರಣ್ಯದ ಬಳಿ ವಾಹನವನ್ನು ಬಿಟ್ಟು ಸಿಬ್ಬಂದಿಗಳೊಂದಿಗೆ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದೆ.