ಕಟ್ಟಿಗೆ ತರಲು ಹೋದ ಬಾಲಕಿ ಅನುಮಾನಾಸ್ಪದ ಸಾವು…

76
firstsuddi

ಕಲಬುರಗಿ : ಮನೆ ಹಿಂದೆ ಕಟ್ಟಿಗೆ ತರಲು ಹೋದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಪಾಣೆಗಾಂವ್ ಗ್ರಾಮದಲ್ಲಿ ನಡೆದಿದೆ. ಪಾಯಲ್ (15) ಮೃತ ಬಾಲಕಿ.

ನಿನ್ನೆ ಸಂಜೆ ಬಾಲಕಿ ಕಟ್ಟಿಗೆ ತರುತ್ತೇನೆಂದು ಮನೆಯ ಹಿಂಭಾಗಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕಳೆದ ರಾತ್ರಿ ಸಾವನ್ನಪ್ಪಿದ್ದಾಳೆ.

ಪಾಣೆಗಾಂವ್ ಗ್ರಾಮದ ನಿವಾಸಿಗಳಾದ ಸುನೀಲ್ ಮತ್ತು ಆತನ ಸ್ನೇಹಿತ ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತ ಬಾಲಕಿಯ ಪೋಷಕರು ಆರೋಪ ಮಾಡಿದ್ದು, ಈ ಕುರಿತು ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.